ಮುಸ್ಲಿಂರ ಮನೆ ಹೊಕ್ಕು ಹೊಡಿಯಬೇಕಂತೆ!

Spread the love

 

ಪ್ರಜಾಪಥ ವಾರ್ತೆ

ಗದಗ: ಮುಸ್ಲಿಂ ಯುವಕರು ಹಿಂದೂ ಹುಡುಗಿಯರ ಮುಗ್ಧತೆ ದುರುಪಯೋಗಪಡಿ ಸಿಕೊಂಡು, ಪ್ರೇಮದ ಹೆಸರಿನಲ್ಲಿ ‘ಲವ್ ಜಿಹಾದ್’ ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗದಗ, ಹುಬ್ಬಳ್ಳಿ, ಬಾಗಲಕೋಟ ಸೇರಿ ಹಲವೆಡೆ ಇಂತಹ ಘಟನೆಗಳು ನಡೆಯುತ್ತಿವೆ. ಹಿಂದೂ ಸಮಾಜದ ಬಗ್ಗೆ ಕಳಕಳಿ ಇರುವ ಮಠಾಧೀಶರು ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ. ಆದರೆ, ಸರ್ಕಾರದ ಅನುದಾನ ಪಡೆದು, ತಮ್ಮ ಧರ್ಮ ಪ್ರಸಾರ ಮಾಡುತ್ತಿದ್ದಾರೆ.ಕುರ್ ಆನ್‌ನಲ್ಲಿ ಹಿಂದೂಗಳನ್ನು ದ್ವೇಷಿಸುವ ಬಗ್ಗೆ ಮೌಲ್ವಿಯೊಬ್ಬರು ಓದಿಸುವ ವಿಡಿಯೋ ತಮ್ಮ ಬಳಿಯಿದೆ. ಇಷ್ಟೆಲ್ಲ ಇದ್ದರೂ ಬಹುತೇಕ ಮಠಾಧೀಶರು ಮೌನಕ್ಕೆ ಜಾರಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳೂ ವೋಟಿನ ಸ್ವಾರ್ಥಕ್ಕಾಗಿ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ. ಅದರಲ್ಲೂ ಕೆಲ ರಾಜಕೀಯ ಪಕ್ಷಗಳಂತೂ ಮುಸ್ಲಿಂರಿಗೇ ಹುಟ್ಟಿದಂತೆ ವರ್ತಿಸುತ್ತಿವೆ ಎಂದು ಕಿಡಿಕಾರಿದರು. ಹಿಂದೂ ಸಮಾಜ, ಮಠಾಧೀಶರು ಎಚ್ಚೆತ್ತುಕೊಂಡು, ಇಂಥವರ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.

ಮನೆ ಹೊಕ್ಕು ಹೊಡಿಯಬೇಕು: ಮುಸ್ಲಿಂ ರಾಷ್ಟ್ರ ಮಾಡುವುದು ಮುಸ್ಲಿಂರ ಹಿಡನ್ ಅಜೆಂಡಾ. ಹಿಂದೂ ಯುವತಿಯರನ್ನು ಬಲವಂತವಾಗಿ ಪ್ರೇಮದ ಪಾಶಕ್ಕೆ ತಳ್ಳುವ ಮುಸ್ಲಿಂ ಯುವಕರ ಮನೆ ಹೊಕ್ಕು ಹೊಡೆಯಬೇಕು. ಮದರಸಾಗಳಲ್ಲಿ ಭಯೋತ್ಪಾದನೆ ಕಲಿಸುತ್ತಾರೆ. ಹಿಂದೂ ದ್ವೇಷ ಬಿತ್ತುವ ಪಾಠವನ್ನು ಅಲ್ಲಿನ ಮೌಲ್ವಿಗಳು ಮಾಡುತ್ತಿದ್ದಾರೆ. ಯುವಕರಿಗೆ ಅಲ್ಪಸಂಖ್ಯಾತರು ಎಂಬ ಪದ ಬಳಸುವವರು ಸೋಗಲಾಡಿ ರಾಜಕಾರಣಿಗಳು ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀಕಾಂತ ಖಟವಟೆ, ವಿನೋದ ಶಿದ್ಲಿಂಗ್, ಈಶ್ವರಸಾ ಮೇರವಾಡೆ, ಜಗನ್ನಾಥಸಾ ಭಾಂಡಗೆ, ಪ್ರಕಾಶ ಬಾಕಳೆ ಸೇರಿ ಅನೇಕರು ಇದ್ದರು.

Leave a Reply

Your email address will not be published. Required fields are marked *