- ಪಂ.ಪುಟ್ಟರಾಜ ಕವಿ ಗವಾಯಿಗಳವರ 110ನೇ ಜಯಂತಿ
- ಜ. ಫಕೀರ ದಿಂಗಾಲೇಶ್ವರ ಸ್ವಾಮಿಗಳು ಅಭಿಮತ
- ಕೆ.ಎಚ್. ಪಾಟೀಲ ಅಭಿಮಾನಿ ಬಳಗದಿಂದ ನಡೆದ ಸಾಮೂಹಿಕ ವಿವಾಹ
- 25 ಜೋಡಿ ದಂಪತಿಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆ
ಪ್ರಜಾಪಥ ವಾರ್ತೆ
ಗದಗ: ಯಾರ ಹುಟ್ಟಿನಿಂದ ಜಗತ್ತಿಗೆ ಪರೋಪಕಾರ ವಾಗಿದೆ, ಯಾರು ಲಕ್ಷೆÆÃಪಲಕ್ಷ ಜನರಿಗೆ ನೆರಳಾಗಿದ್ದಾರೋ ಅಂತವರ ಹುಟ್ಟು ಹಬ್ಬವನ್ನು ಆಚರಣೆ ಮಾಡ ಬೇಕು. ಇಡೀ ನಾಡಿನ ಅಂಧ- ಅನಾಥ ಮಕ್ಕಳಿಗೆ ಬೆಳಕು ನೀಡಿದ ಲಿಂ. ಪಂ.ಪುಟ್ಟರಾಜ ಕವಿ ಗವಾಯಿಗಳನ್ನು ಪ್ರತಿದಿನ ಸ್ಮರಿಸಿ ಹುಟ್ಟು ಹಬ್ಬ ಆಚರಿಸುವದು ತಪ್ಪಲ್ಲ ಎಂದು ಶಿರಹಟ್ಟಿ ಸಂಸ್ಥಾನಮಠದ ಉತ್ತರಾ ಧಿಕಾರಿ ಜ. ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ ಕೌತಾಳ ನೇತೃತ್ವದಲ್ಲಿ ನಗರದ ಎಪಿಎಂಸಿ ಪ್ರಾಂಗಣದಲ್ಲಿ ಇರುವ ವೀರೇಶ್ವರ ಪುಣ್ಯಾಶ್ರಮದ ಪಕ್ಕದ ಬಯಲು ಜಾಗೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳವರ 110 ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
ನಗರದ ಆಧ್ಯಾತ್ಮ ವಿದ್ಯಾಶ್ರಮದ ಪೂಜ್ಯ ನೀಲಮ್ಮ ತಾಯಿ ಅಸುಂಡಿ ಅವರು ಮಾತನಾಡಿ, ಪಂ.ಪುಟ್ಟರಾಜ ಕವಿ ಗವಾಯಿಗಳವರ ಜಯಂತಿ ಅಂಗವಾಗಿ ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ಫೀರಸಾಬ ಕೌತಾಳ ಅವರು ವೈಯಕ್ತಿಕವಾಗಿ ಹಮ್ಮಿಕೊಳ್ಳುವ ಸಾಮೂಹಿಕ ವಿವಾಹ, ಜಯಂತಿ ನೋಡುವುದೇ ಒಂದು ಹಬ್ಬ ಎಂದು ಬಣ್ಣಿಸಿ, ಸ್ವರವನ್ನು ಕೆತ್ತಿ, ಹಾಡು ಹಾಡಿಸಿದ ಪಂ.ಪುಟ್ಟರಾಜ ಕವಿ ಗವಾಯಿಗಳವರು ಸಮಾಜಕ್ಕೆ ಹಲವಾರು ಪ್ರತಿಭೆಗಳನ್ನು ನೀಡಿದ್ದಾರೆ. ಮನುಷ್ಯನನ್ನು ಮಹಾಂತನನ್ನಾಗಿ ಮಾಡುವ ಕೈಗಾರಿಕೆ ವೀರೇಶ್ವರ ಪುಣ್ಯಾಶ್ರಮ ಎಂದು ಹೇಳಿದರು.
ಯುವ ಮುಖಂಡ ಕೃಷ್ಣಗೌಡ ಎಚ್. ಪಾಟೀಲ ಅವರು ಮಾತ ನಾಡಿ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸವಾಲಾಗಿರುವ ಮದುವೆಯನ್ನು ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ಪೀರಸಾಬ ಕೌತಾಳ ಅವರು ವೈಯಕ್ತಿಕವಾಗಿ ಹಣವನ್ನು ಖರ್ಚು ಮಾಡಿ ಪಂ. ಪುಟ್ಟ ರಾಜ ಗವಾಯಿ ಗಳವರ ಜಯಂತಿ ಅಂಗವಾಗಿ ಕಳೆದ 10 ವರ್ಷದಿಂದ ಸಾಮೂಹಿಕ ವಿವಾಹಗಳ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಪೂಜ್ಯರ ಜಯಂತಿ ದಿನ ಹಸೆಮಣೆಗೆ ಏರುವ ನವದಂಪತಿಗಳು ಪುಣ್ಯ ವಂತರು. ಪ್ರತಿ ವರ್ಷ ಅವರ ಜಯಂತಿಯಂದು ತಾವು ವಿವಾಹ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾಗುತ್ತೀರಿ ಎಂದು ಹೇಳಿದರು.
ಗದುಗಿನ ಶಿವಾನಂದ ಮಠದ ಪೂಜ್ಯಶ್ರೀ ಅಭಿನವ ಶಿವಾನಂದ ಸ್ವಾಮೀಜಿಗಳು, ಬಳಗಾನೂರಿನ ಪೂಜ್ಯಶ್ರೀ ಶಿವಶಾಂತವೀರ ಶರಣರು, ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಪೂಜ್ಯಶ್ರೀ ಶಿವಕುಮಾರ ಸ್ವಾಮಿಗಳು, ರಾಜೂರ-ಅಡ್ನೂರ-ಗದಗ ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾ ಚಾರ್ಯ ಸ್ವಾಮಿಗಳು, ಇಸ್ಲಾಂ ಧರ್ಮ ಗುರುಗಳಾದ ಇನಾ ಯತ್ ಉಲ್ಲಾ ಪೀರಜಾದೆ ಅವರು ಸಾನಿಧ್ಯ ವಹಿಸಿದ್ದರು. ಪೂಜ್ಯಶ್ರೀ ಕಲ್ಲಯ್ಯಜ್ಜ ನವರು ಸಮ್ಮುಖ ವಹಿಸಿದ್ದರು.
ಕೆ.ಎಚ್. ಪಾಟೀಲ್ ಅಭಿಮಾನಿ ಬಳಗದ ಅಧ್ಯಕ್ಷ ಪೀರ ಸಾಬ್ ಕೌತಾಳ, ಪತ್ರಕರ್ತ ಆನಂದ ಸಾಲಿಗ್ರಾಮ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ 25 ಜೋಡಿ ನವ ದಂಪತಿಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಸಾಹಿತಿ ಐ.ಕೆ. ಕಮ್ಮಾರ, ಪತ್ರಿಕಾ ಛಾಯಾಗ್ರಾಹಕ ವೈ.ಎಸ್. ಮಹೇಂದ್ರಕರ ಅವರನ್ನು ಸನ್ಮಾನಿಸ ಲಾಯಿತು. ಶಿವ ಲಿಂಗಯ್ಯ ಶಾಸ್ತ್ರಿ ಸಿದ್ದಾಪೂರ ಅವರು ನಿರೂಪಿಸಿದರು.
ಅವಳಿ ನಗರದಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳವರ 110 ನೇ ಜಯಂತಿ ಅಂಗವಾಗಿ ವಿವಿಧ ವಿಶೇಷ ಪೂಜೆ, ಅನ್ನ ಸಂತರ್ಪಣೆ ಜರುಗಿದವು. ಕಾರ್ಯ ಕ್ರಮಕ್ಕೂ ಮುನ್ನ ಪಂ.ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರದ ಮೆರವಣಿಗೆ ನಡೆಯಿತು. ವಿನೋದ ಸಿದ್ಲಿಂಗ, ರಮೇಶ ಮುಳಗುಂದ, ದಾವಲಸಾಬ ಇರಕಲ್ ಸೇರಿ ಸಮಿತಿ ಸದಸ್ಯರಿದ್ದರು.