ಪ್ರಜಾಪಥ ವಾರ್ತೆ
ಕುಶಾಲನಗರ (ಕೊಡಗು): ಕುಶಾಲನಗರ ತಾಲ್ಲೂಕಿನ ಕಣಿವೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಶ್ರೀ ರಾಮ ನವಮಿಯ ಅಂಗವಾಗಿ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಗಿನಿಂದ ಶಿವಲಿಂಗಕ್ಕೆ ಹಾಲು, ಮೊಸರು ಜೇನುತುಪ್ಪ ಕಲ್ಲು ಸಕ್ಕರೆ ಎಳನೀರು ಪಂಚಾಮೃತ ಗಳಿಂದ ಅಭಿಷೇಕಗಳನ್ನು ನೆರವೇರಿಸಿ ಸುಗಂಧ ಪುಷ್ಪಗಳಿಂದ ಸುಂದರ ರೀತಿಯಲ್ಲಿ ಅಲಂಕಾರವನ್ನು ಮಾಡಲಾಗಿತ್ತು ನಂತರ ರಾಮನ ಮೂರ್ತಿಗೆ ಬೆಳ್ಳಿಯ ಕವಚವನ್ನು ಧರಿಸಿ ಸುಗಂಧ ಪುಷ್ಪಗಳಿಂದ ಸುಂದರಿಯಲ್ಲಿ ಅಲಂಕಾರವನ್ನು ಮಾಡಲಾಗಿತ್ತು.
ಬ್ರಹ್ಮ ರಥೋತ್ಸವಕ್ಕೆ ಕಣಿವೆ ಭಾಗದ ಸುತ್ತಮುತ್ತಲಿನ ಹೆಬ್ಬಾಲೆ ಕೂಡಿಗೆ ಶಿರಂಗಾಲ ತೊರೆನೂರು ಕೂಡ ಮಂಗಳೂರು ಭಾಗಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನವನ್ನು ಮಾಡಿ ಕಣ್ಣು ತುಂಬಿಕೊಂಡು ಪಾವನರಾದರು ಅರ್ಚಕರ ಸಮ್ಮುಖದಲ್ಲಿ ದೇವಾಲಯದ ಆವರಣದಲ್ಲಿ ಹೋಮ ಪೂಜಾ ಕಾರ್ಯಕ್ರಮಗಳು ಅರ್ಚಕರು ಅರ್ಥಪೂರ್ಣವಾಗಿ ದೇವರಿಗೆ ವೇದ ಮಂತ್ರಗಳನ್ನು ಜಪಿಸಿ ಮಹಾಮಂಗಳಾರತಿಯನ್ನು ಮಾಡಿದರು ನಂತರ ಬ್ರಹ್ಮ ರಥೋತ್ಸವಕ್ಕೆ ಪೂಜೆಗಳನ್ನು ಸಲ್ಲಿಸಿ ನಂತರ ರಾಮನ ವಿಗ್ರಹವನ್ನು ರಥದಲ್ಲಿ ಕೂರಿಸಿ ರಾಜ ಬೀದಿಯಲ್ಲಿ ರಥವನ್ನು ಭಕ್ತಾದಿಗಳ ಸಮ್ಮುಖದಲ್ಲಿ ಎಳೆಯಲಾಯಿತು ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಕೆ.ಎನ್.ಸುರೇಶ್ , ಗೌರವಾಧ್ಯಕ್ಷರಾದ ಗಣೇಶ್ ಕಾರ್ಯದರ್ಶಿ ಶೇಷಾಚಲ, ಉಪಾಧ್ಯಕ್ಷರಾದ ಮಂಜುನಾಥ್ ಸ್ವಾಮಿ, ಸಹ ಕಾರ್ಯದರ್ಶಿ ಮಹೇಶ್ ಕುಮಾರ್, ಕಾರ್ಯಾಧ್ಯಕ್ಷ ಮಾಧವ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರುಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.