Prajapath

ಮುಖ್ಯಾಂಶಗಳು

ಸಾರ್ವಜನಿಕರ ಕಣ್ಮನ ಸೆಳೆದ ‘ಪಂಚ ಗ್ಯಾರಂಟಿ’ ಯೋಜನೆಗಳ ವಸ್ತುಪ್ರದರ್ಶನ

Spread the love

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಸ್ತು ಪ್ರದರ್ಶನ

ಗ್ಯಾರಂಟಿ ಯೋಜನೆಗಳ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಚಾಲನೆ

 

ಪ್ರಜಾಪಥ ವಾರ್ತೆ

ಗದಗ: ನಗರದ ಹೊಸಬಸ್ ನಿಲ್ದಾಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಂದ ಉದ್ಘಾಟನೆಗೊಂಡ  ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಏಪರ್ಡಿಸಿದ ಗ್ಯಾರಂಟಿ ಯೋಜನೆಗಳ ವಸ್ತುಪ್ರದರ್ಶನವು ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮಿ, ಶಕ್ತಿ, ಯುವ ನಿಧಿ, ಗೃಹ ಜ್ಯೋತಿ , ಅನ್ನಭಾಗ್ಯ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳ ಮಾಹಿತಿಯನ್ನು ಪ್ರದರ್ಶಿಸಿದ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು  ಜಿಲ್ಲಾಧಿಕಾರಿಗಳು ಪ್ರಶಂಸಿಸಿದರು.  ಮಾರ್ಚ 4 ರಿಂದ 6 ರವರೆಗೆ ಈ ವಸ್ತುಪ್ರದರ್ಶನ ಏರ್ಪಡಿಸಲಾಗಿದ್ದು ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ  ಕಾರ್ಯನಿರತ ಪತ್ರಕರ್ತರ  ಸಂಘದ ಜಿಲ್ಲಾ ಅಧ್ಯಕ್ಷರಾದ ರಾಜು ಹೆಬ್ಬಳ್ಳಿ, ವಾರ್ತಾಧಿಕಾರಿ ವಸಂತ ಮಡ್ಲೂರ,  ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮೀನಾಕ್ಷಿ , ಗಣ್ಯರಾದ ಅಶೋಕ ಮಂದಾಲಿ,  ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕರಾದ ವಿ.ಎಫ್. ಜಾಧವ ಹಾಜರಿದ್ದರು.

ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿದ ವಿವಿಧ ಯೋಜನೆಗಳ ಮಾಹಿತಿ : ಹಸಿವು ಮುಕ್ತ ಕರ್ನಾಟಕವನ್ನಾಗಿಸುವ  ರಾಜ್ಯ ಸರ್ಕಾರದ  ಮಹತ್ತರ ಯೋಜನೆಯಾದ ಅನ್ನಭಾಗ್ಯ  ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಉಚಿತ 10 ಕೆ.ಜಿ.ಆಹಾರಧಾನ್ಯ ಸೇರಿದಂತೆ ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ 5 ಕೆ.ಜಿ. ಅಕ್ಕಿ ಬದಲಿಗೆ ರೂ 170 ರಂತೆ  4.02 ಕೋಟಿ ಫಲಾನುಭವಿಗಳಿಗೆ ರೂ 4595 ಕೋಟಿ ವರ್ಗಾಯಿಸುವುದರ ಮೂಲಕ ಬಡವರ ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಿ ಬಲವರ್ಧನೆ ಗೆ ಸಹಾಯಕವಾಗಿದೆ.

ಮಹಿಳೆಯರ ಸ್ವಾವಲಂಬನೆ ಬದುಕು ನಿರ್ಮಿಸಲು ಶಕ್ತಿ ಯೋಜನೆಯಡಿ 136 ಕೋಟಿ ಮಹಿಳೆಯರು,ಯುವತಿಯರು,ಹಾಗೂ ವಿದ್ಯಾರ್ಥಿನಿಯರು ಉಚಿತ ಪ್ರಯಾಣ ಮಾಡುವುದರ ಮೂಲಕ ಶಕ್ತಿ ಯೋಜನೆ  ಮಹಿಳೆಯರ ಸಬಲೀಕರಣಕ್ಕೆ ಮಾದರಿಯಾಗಿದೆ.

ಪ್ರತಿ ಮನೆಯಲ್ಲಿಯೂ ಭಾಗ್ಯದ ಬೆಳಕು ಬೆಳಗಬೇಕು ಎನ್ನುವ ಆಶಯದಂತೆ  ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ನೀಡುವುದರ ಮೂಲಕ 5 ಕೋಟಿ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.

ಕರ್ನಾಟಕದ ಮಹಿಳೆಯರು ಸ್ವ ಸಾಮರ್ಥ್ಯ ಸ್ವಯಂ ಸ್ಥೆöÊರ್ಯ ಹಾಗೂ ಸ್ವಯಂ ಗೌರವದಿಂದ ಜೀವನ ಸಾಗಿಸಲು ಪ್ರತಿ ಮಾಹೆ ಪ್ರತಿ ಮಹಿಳೆಯರಿಗೆ ರೂ 2000 ರಂತೆ ರೂ 11726 ಕೋಟಿ ರೂಗಳನ್ನು ನೇರವಾಗಿ 1.09 ಕೋಟಿ ಯಜಮಾನಿಯರಿಗೆ ವರ್ಗಾಯಸಿ ವಿಶ್ವ ದಾಖಲೆ ನಿರ್ಮಿಸಿದೆ.

ಯುವಕರ ಶ್ರೇಯೋಭಿವೃದ್ಧಿಗಾಗಿ ಯುವನಿಧಿ ಯೋಜನೆಯಡಿ 2023 ರಲ್ಲಿ ಉತ್ತೀರ್ಣರಾದ ಪದವೀಧರರು ಹಾಗೂ ಡಿಪ್ಲೋಮಾ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ.

ಜನಸ್ಪಂದನದಿAದ ಜನರ ಬಳಿಗೆ ಸರ್ಕಾರ ಎನ್ನುವಂತೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾಧಿಕಾರಿಗಳಿಂದ ಜನತಾ ದರ್ಶನ ಕಾರ್ಯಕ್ರಮ ಮೂಲಕ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವುದರ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಲಾಗಿದೆ.

ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ 15068 ಕುಂದು ಕೊರತೆಗಳಲ್ಲಿ 9780 ಕುಂದು ಕೊರತೆಗಳನ್ನು ವಿಲೇ ಮಾಡಲಾಗಿದೆ.ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವುದರ ಮೂಲಕ  ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನುಗಳಿಗೆ ಅನಧಿಕೃತ ಪರಭಾರೆಯಿಂದ ರಕ್ಷಣೆ ಸೇರಿದಂತೆ ಸಕ್ಷಮ ಪ್ರಾಧಿಕಾರದ ಯಾವುದೇ ಕಾಲಮಿತಿ ಇಲ್ಲದೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸುವ ಉದ್ದೇಶದಿಂದ ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ ಮಾಡಲಾಗಿದೆ.ಬೆಂಗಳೂರಿನ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನಾಗರೀಕರ ಧ್ವನಿ ಈಗ ಸರ್ಕಾರದ ಧ್ವನಿ ಎಂಬ ಘೋಷವಾಕ್ಯದೊಂದಿಗೆ ಬ್ರಾ÷್ಯಂಡ್ ಬೆಂಗಳೂರು ಪರಿಕಲ್ಪನೆಯ ಚಿಂತನಶೀಲ ಉಪಕ್ರಮಕ್ಕೆ ಚಾಲನೆ.

ಸಾಮಾಜಿಕ ನ್ಯಾಯದ ಮೂಲ ಹರಿಕಾರನಿಗೆ ಕರ್ನಾಟಕ ಸರ್ಕಾರದ ಗೌರವ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರು ಕರ್ನಾಟಕದ ಸಾಂಸ್ಕöÈತಿಕ ನಾಯಕ ಎಂದು ಘೋಷಿಣೆ ಮಾಡುವುದರ ಮೂಲಕ ಮಹತ್ತರ ನಿಲುವನ್ನು ತೆಗೆದುಕೊಂಡಿದೆ.

ಗ್ಯಾರAಟಿ ಯೋಜನೆಗಳನ್ನು ಸೇರಿದಂತೆ ಸರ್ಕಾರದ ವಿವಿಧ ಮಹತ್ತರ ಯೋಜನೆಗಳ ಮಾಹಿತಿಯನ್ನು ವಸ್ತು ಪ್ರದರ್ಶನದಲ್ಲಿ ಫಲಕಗಳ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿ  ಪ್ರದರ್ಶಿಸಲಾಗಿತ್ತು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!