Prajapath

ಮುಖ್ಯಾಂಶಗಳು

ಲೋಕಸಭಾ ಚುನಾವಣೆ ನಿಮಿತ್ತ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ‘ಹಾರ್ಡ್ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿ: ಕ್ರಿಕೆಟ್ ಆಡುವ ಮೂಲಕ ಮತದಾನ ಜಾಗೃತಿ ಮೂಡಿಸಿದ ಮಾಧ್ಯಮ, ಶಿಕ್ಷಣ ಇಲಾಖೆ ತಂಡಗಳು

Spread the love
  • ಶಿಕ್ಷಣ ಇಲಾಖೆ ತಂಡಕ್ಕೆ ಗೆಲುವ
  • ಉತ್ತಮ ಪ್ರದರ್ಶನ ನೀಡಿದ ಮಾಧ್ಯಮ ತಂಡ

 

ಪ್ರಜಾಪಥ ವಾರ್ತೆ

ಗದಗ: ನಗರದ ವಿಡಿಎಸ್ ಮೈದಾನದಲ್ಲಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್ ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲಿಕರಣ ಕ್ರೀಡಾ ಇಲಾಖೆ ವತಿಯಿಂದ ಮತದಾನ ಜಾಗೃತಿ ಅಂಗವಾಗಿ ಹಮ್ಮಿಕೊಂಡಿದ್ದ ಟೆನಿಸ್‍ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ
ಗುರುವಾರ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಮಾಧ್ಯಮ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಧ್ಯಮ ತಂಡವು ಉತ್ತಮ ಪ್ರದರ್ಶನ ನೀಡಿ ಸೋಲು ಕಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮಾಧ್ಯಮ ತಂಡವು(2) ಉತ್ತಮ ಆರಂಭ ಪಡೆಯಿತು. ಮೊದಲ ಓವರ್ ಮೊದಲೇ ಬಾಲ್ ಅನ್ನು ಪರಮೇಶ ಲಮಾಣಿ ಬೌಂಡರಿ ಗೆರೆ ದಾಟಿಸುವ ಮೂಲಕ ಉತ್ತಮ ಆರಂಭ ನೀಡಿದರು.
ರಮೇಶ ಭಜಂತ್ರಿ ಮತ್ತು ಪರಮೇಶ ಲಮಾಣಿ ಆರಂಭಿಕರಾಗಿ 2 ಓವರ್ ಗೆ 14 ರನ್ ಜತೆ ಆಡಿದರು. ತದ ನಂತರ ಕನ್ನಡಪ್ರಭ ವರದಿಗಾರ ಶಿವಕುಮಾರ ಕುಷ್ಟಗಿ ಮಧ್ಯಮ ಕ್ರಮಾಂಕದಲ್ಲಿ ತಂಡವು ಉತ್ತಮ ಮೊತ್ತ ಗಳಿಸುವಲ್ಲಿ ಕೊಡುಗೆ ನೀಡಿದರು. ತಂಡವು 5 ಓವರ್ ನಲ್ಲಿ 28 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿ ಇದ್ದ ಸಂದರ್ಭ ದಲ್ಲಿ ಶಿವಕುಮಾರ್ ಕುಷ್ಟಗಿ ವಿಕೆಟ್ ಒಪ್ಪಿಸಿದರು. ನಂತರ ವಿನಾಯಕ ಚೌಡಾಪುರ ಹಾಗೂ ವಿಜಯವಾಣಿ ವರದಿಗಾರರ ಶಿವಾನಂದ ಹಿರೇಮಠ ಜತೆಯಾಟದಲ್ಲಿ 8 ಓವರ್ ನಲ್ಲಿ 66 ರನ್ನ ಬಂದವು. ಉದಯವಾಣಿ ವರದಿಗಾರರ ಅರುಣ ಹಿರೇಮಠ ಮತ್ತು ಪರಶು ಹಳ್ಳದ ಜೊತೆಯಾಟದಲ್ಲಿ 10 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ ಮಾಧ್ಯಮ ತಂಡ(2) 80 ರನ್ ಗಳಿಸಿ ಸವಾಲಿನ ಮೊತ್ತ ನೀಡಿತು.
ಟರ್ನಿಂಗ್ ಪಾಯಿಂಟ್: ಮೊದಲ ಓವರ್ ಎಸೆದ ಪರಶುರಾಮ ಲಮಾಣಿ 7 ರನ್ ನೀಡಿ ಉತ್ತಮ ಬೌಲಿಂಗ್ ಮಾಡಿದರು. ಕುಷ್ಟಗಿ ಅವರು ಎಸೆದ್ ಎರಡನೇ ಓವರ್ ನಲ್ಲಿ ಶಿಕ್ಷಣ ಇಲಾಖೆ ಆರಂಭಿಕ ಬ್ಯಾಟರ್ ಪವನ ಜೋಶಿ ಬೌಂಡರಿ ಲೈನ್ ದಾಟಿಸುವ ಪ್ರಯತ್ನದ ಹೊಡೆತವನ್ನು ಕ್ಯಾಚ್ ಹಿಡಿಯುವಲ್ಲಿ ಶಿವಾನಂದ ಹಿರೇಮಠ ಕೈಚೆಲ್ಲಿದರು. ಕ್ಯಾಚ್ ಕೈಚೆಲ್ಲಿದ ಪರಿಣಾಮವಾಗಿ ಪವನ್ ಜೋಶಿ ಉತ್ತಮ ಆಟ ಪ್ರದರ್ಶಿಸಿ 52 ರನ್ ಗಳಿಸಿ ಶಿಕ್ಷಣ ಇಲಾಖೆ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 6 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 80 ರನ್ ಗಳ ಗುರಿಯನ್ನು ದಾಟುವ ಮೂಲಕ 10 ವಿಕೆಟ್ ಗಳ ರೋಚಕ ಗೆಲುವು ದಾಖಲಿಸಿತು. ಶಿಕ್ಷಣ ಇಲಾಖೆ ತಂಡದ ಪರ ಪವನ ಜೋಶಿ ಅರ್ಧ ಶತಕ ಬಾರಿಸಿ ಮಿಂಚಿದರು.

ಬೌಲಿಂಗ್ ವಿಫಲ: ಪ್ರ್ಯಾಕ್ಟೀಸ್ ಕೊರತೆಯ ನಡುವೆಯೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 10 ಓವರ್ ನಲ್ಲಿ 80 ರನ್ ಗಳಿಸಿದ್ದ ಮಾಧ್ಯಮ ತಂಡ(2) ಬೌಲಿಂಗ್ ನಲ್ಲಿ ಸಂಪೂರ್ಣ ವಿಫಲ, ಮತ್ತು ಕ್ಯಾಚ್ ಕೈಚೆಲ್ಲಿದ ಪರಿಣಾಮ ವೀರೋಚಿತ ಸೋಲು ಕಂಡಿತು.

*ಮತದಾನ ಜಾಗೃತಿ ಮೂಡಿಸಿದ ಮಾಧ್ಯಮ ತಂಡ*
ಸ್ವೀಪ್ ಸಮಿತಿ ವತಿಯಿಂದ ಟೆನಿಸ್‍ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಪಂದ್ಯ ಆಡುವ ಮೂಲಕ ಮಾಧ್ಯಮದವರು ಕೂಡ ಮತದಾನ ಜಾಗೃತಿ ಮೂಡಿಸಿದರು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ, ಜಿಲ್ಲಾ ಗೌರವ ಅಧ್ಯಕ್ಷ ಬಸವರಾಜ ಬಳ್ಳಾರಿ, ಡಿಡಿಪಿಐ ಎ.ಎಂ. ರಡ್ಡೇರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ, ಬಿಇಓಗಳಾದ ವಿ.ವಿ. ನಡುವಿನಮನಿ, ಆರ್.ಎಸ್. ಬುರಡಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಇದ್ದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!